ಬ್ಯಾಟರಾಯನಪುರದ ಅದ್ಬುತ ರಸ್ತೆ ಕಾಮಗಾರಿಗಳು…!
1 min readಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಅಮೃತಹಳ್ಳಿ ಹತ್ತಿರದ ಬಾಲಾಜಿ ಲೇಔಟ್ ನಲ್ಲಿ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದಯೇ ರಸ್ತೆ ಡಾಂಬರೀಕರಣ ಮಾಡಲಾಗಿದೆ, ಕ್ಷೇತ್ರದ ಎಲ್ಲಾ ಕಾಮಗಾರಿಗಳ ಮೇಲ್ವಿಚಾರಣೆ ಮಾಡುವ ಕೆಬಿಜಿ ಅವರು ಇಂತಹ ಕಾಮಗಾರಿಗಳ ಬಗ್ಗೆ ಏನು ಹೇಳುತ್ತಾರೆ ?, ಚರಂಡಿಯ ಕಾಮಗಾರಿಯನ್ನು ಮಾಡದೆ ರಸ್ತೆಗೆ ಟಾರು ಹಾಕುವ ಅವಸರವೇನಿತ್ತು ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ಶಾಸಕ ಕೃಷ್ಣ ಬೈರೇಗೌಡರನ್ನು ದೂರುತ್ತಿದ್ದಾರೆ, ನೀವು ಎಲ್ಲೂ ಸಹಾ ಈ ರೀತಿಯ ರಸ್ತೆ ಕಾಮಗಾರಿಯನ್ನು ನೋಡಲು ಸಾಧ್ಯವಿಲ್ಲ ಅದು ನಮ್ಮ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ, ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಮಾನ್ಯ ಶಾಸಕರ ಅವಸರದ ಚುನಾವಣೆಯ ತಂತ್ರಗಳಿಂದ ಇಂತಹ ಅವೈಜ್ಞಾನಿಕ ಕಾಮಗಾರಿಗಳು ನೆಡೆಯುತ್ತಿವೆ ಎಂದು ಶ್ರೀ ಸಾಮಾನ್ಯರು ಪರಿತಪ್ಪಿಸುತ್ತಿದ್ದಾರೆ.