ಗ್ಯಾರಂಟಿಯ ಜಾರಿಯ ಸುತ್ತ ಕ್ಷೇತ್ರದ ಬಿಜೆಪಿಗೆ ಇರಬೇಕು ಚಿತ್ತ
1 min readಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಕುಂದು ಕೊರತೆಗಳ ಬಗ್ಗೆ ಒಂದು ನೋಟ, ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಾಸರಹಳ್ಳಿ ಯಲ್ಲಿ ಬೆಸ್ಕಾಂ ನವರು ಮಾಡಿರುವ ಅವೈಜ್ಞಾನಿಕ ಕೆಲಸಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ ರಸ್ತೆಯ ಮೇಲ್ಬದಿಯಲ್ಲೇ 11 ಕೆ ವಿ ಯುಜಿ ಕೇಬಲ್ ಗಳನ್ನು ಅಳವಡಿಸಿದ್ದಾರೆ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಜನರ ಮೇಲಾಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು, ಬೆಸ್ಕಾಂ ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದರು ಸಹಾ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ನ್ಯೂಸ್ ರೆವೊಲ್ಯೂಷನ್ ಗೆ ತಿಳಿಸಿದರು, ಹಾಗೂ ದಾಸರಹಳ್ಳಿ ಯಲ್ಲಿ ಹಿಂದೂ ರುದ್ರಭೂಮಿಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಬೇಕು ಎಂದು ಸರಿಸುಮಾರು 10 ವರ್ಷಗಳಿಂದ ಕೇಳಿ ಕೊಂಡು ಬರುತ್ತಿದಿವಿ ಮಾನ್ಯ ಕೃಷ್ಣಭೈರೇಗೌಡರ ಗಮನಕ್ಕೂ ತಂದಿದ್ದೇವೆ ಆದರೆ ಈ ಸಮಸ್ಯೆಗೆ ಪರಿಹಾರ ಇನ್ನೂ ದೊರಕಿಲ್ಲ ಎಂದರು, ಕಾಂಗ್ರೆಸ್ ಸರ್ಕಾರ ನೀಡಿದ ಫ್ರೀ ಬಸ್ ಶಕ್ತಿ ಯೋಜನೆಯ ಕುರಿತು ಆಟೋ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ, ಮೊದಲು ನಾವು ದಿನಕ್ಕೆ ಎಲ್ಲಾ ಖರ್ಚುಗಳನ್ನು ಕಳೆದು 300 ರೂಪಾಯಿ ಉಳಿಸಿಕೊಂಡು ಹೇಗೋ ಜೀವನ ಮಾಡುತ್ತಿದ್ದೇವು ಆದರೆ ಈಗ ಮಹಿಳೆಯರಿಗೆ ಬಸ್ ಪ್ರೀ ಕೊಟ್ಟ ಪರಿಣಾಮ ನಮ್ಮ ಸಂಪಾದನೆ ಶೂನ್ಯ ಮಟ್ಟಕ್ಕೆ ತಲುಪುತ್ತಿದೆ ಎಂದು ಆಟೋ ಚಾಲಕರು ತಮ್ಮ ಅಭಿಪ್ರಾಯಗಳನ್ನು ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.