ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಟ್ಟ ಕೆಬಿಜಿ..!
1 min readಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಡೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ, ಇದೇ ಸಂದರ್ಭದಲ್ಲಿ ಮಾನ್ಯ ಕೃಷ್ಣಭೈರೇಗೌಡರು ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಚಾಲನೆ ನೀಡಿದರು, ಬ್ಯಾಟರಾಯನಪುರ ಕ್ಷೇತ್ರಕ್ಕೆ ಸಂಬಂಧಿಸಿದ ಮೊದಲ ಬೂತ್ ತಿಮ್ಮಸಂದ್ರದ ಬಳಿ ಇರುವ ಆದ್ದಿಗಾನಹಳ್ಳಿ ಪಟಾಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ ಕೃಷ್ಣಭೈರೇಗೌಡರು, ಚುನಾವಣಾ ಅನ್ನೋದು ಅತ್ಯಂತ ಅಮೂಲ್ಯವಾದದ್ದು ನಾವು ಜನರ ವಿಶ್ವಾಸವನ್ನು ಪಡೆದುಕೊಳ್ಳಬೇಕು ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಇದೆ ಎಂದು ತಿಳಿಸಿದರು, ಕಳೆದ 4 ವರ್ಷಗಳಿಂದ ಈ ಬಿಜೆಪಿ ಸರ್ಕಾರದ ಮೇಲೆ ಬಹಳಷ್ಟು ಬೇಸರ ತಂದಿದೆ ಜನತೆಗೆ, ಕ್ಷೇತ್ರದಲ್ಲಿ ನಾವು ಯಾವುದೇ ಭ್ರಷ್ಟಾಚಾರ ಮಾಡದೆ ಪರಿಶುದ್ಧವಾದ ಆಡಳಿತ ನಡೆಸಿದ್ದೇವೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭರವಸೆ ಇದೆ ಎಂದು ನ್ಯೂಸ್ ರೆವೊಲ್ಯೂಷನ್ ಗೆ ತಿಳಿಸಿದ ಶಾಸಕ ಕೃಷ್ಣಭೈರೇಗೌಡ.