ಕೆನರಾ ಬ್ಯಾಂಕ್ ಲೇಔಟ್ ಹೆಲ್ತ್ ಕ್ಯಾಂಪ್ ನಲ್ಲಿ ಶ್ರೀಮತಿ ಮೀನಾಕ್ಷಿ ಕೃಷ್ಣಬೈರೇಗೌಡ
1 min read#ತಿಂಡ್ಲುಬಾಯ್ಸ್ ಫೌಂಡೇಷನ್, ಅಧಿಸ್ಟಾನಮ್ ಟ್ರಸ್ಟ್,ಹಾಗೂ ಸಿದ್ಧಿ ವಿನಾಯಕ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ, ಮೆಗಾ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಏರ್ಪಡಿಸಿದ್ದರು, ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮತಿ ಮೀನಾಕ್ಷಿ ಕೃಷ್ಣ ಬೈರೇಗೌಡರು, ಸದ್ಯದಲ್ಲೇ ಕೆನರಾ ಬ್ಯಾಂಕ್ ಲೇಔಟ್ ನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಮಾಡುವ ವಿಚಾರವಾಗಿ ಮಾನ್ಯ ಕೃಷ್ಣ ಬೈರೇಗೌಡರ ಗಮನಕ್ಕೆ ತರುತ್ತೇವೆ ಎಂದು ನ್ಯೂಸ್ ರೆವಲ್ಯೂಷನ್ ಜೊತೆ ಮಾತನಾಡಿದ ಮೀನಾಕ್ಷಿ ಕೃಷ್ಣ ಭೈರೇಗೌಡ, ತಿಂಡ್ಲು ಬಾಯ್ಸ್ ಫೌಂಡೇಶನ್ ಮುಖ್ಯಸ್ಥರಾದಂತಹ ಆನಂದ್ ರವರು ಮಾತನಾಡಿ ನಮ್ಮ ಭಾಗದಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಾಗದ ಜನರಿಗೆ ನಮ್ಮ ಕೈಲಾದ ಸೇವೆಯನ್ನು ಮಾಡಲು ಹೊರಟಿದ್ದೇವೆ ಎಂದು ಹೇಳಿದರು, ಅಧಿ ಸ್ಟಾನಮ್ ಟ್ರಸ್ಟ್ ಅಧ್ಯಕ್ಷರು ಮಾತನಾಡಿ ನಾವು ಈಗಾಗಲೇ ಉಚಿತ ಮಕ್ಕಳ #ಗ್ರಂಥಾಲಯ ತೆರೆದಿದ್ದೇವೆ ಅದು ಎಲ್ಲ ಸಾರ್ವಜನಿಕರಿಗೂ ಸಹಾಯವಾಗಬೇಕು ಹಾಗೂ ನಮ್ಮ ಟ್ರಸ್ಟ್ ಕಡೆಯಿಂದ ಏನು ಸಹಾಯ ಬೇಕಾದರೂ ಸಾರ್ವಜನಿಕರು ಕೇಳಬಹುದು ಎಂದು ಈ ಮೂಲಕ ತಿಳಿಸಿದರು, ಒಟ್ಟಾರೆಯಾಗಿ ಕೆನರಾ ಬ್ಯಾಂಕ್,ಹಾಗೂ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಿಗೆ ಉಚಿತ #ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಒಂದು ವೇದಿಕೆಯಾಗಿ ಕಲ್ಪಿಸಲಾಗಿತ್ತು, ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಗಳಿಸಿದಂತಹ ಕೆನರಾ ಬ್ಯಾಂಕ್ ಲೇಔಟ್ ನಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿರುವಂತಹ ಶ್ರೀಮತಿ ಪುಷ್ಪಲತಾ ಅವರು ಸಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಿ ಹೆಚ್ ಸಿ ಗೆ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ದೊರಕಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ ಮೀನಾಕ್ಷಿ ಕೃಷ್ಣ ಭೈರೇಗೌಡ.