https://newsrevolution.in Fri, 04 Aug 2023 10:48:51 +0000 en-US hourly 1 https://wordpress.org/?v=6.2.2 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png #congress – ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ವಿಶೇಷತೆಗಳು https://newsrevolution.in/highlights-of-514th-jayanti-of-nadaprabhu-kempegowda/ https://newsrevolution.in/highlights-of-514th-jayanti-of-nadaprabhu-kempegowda/#respond Fri, 04 Aug 2023 10:48:51 +0000 https://newsrevolution.in/?p=811 ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಜನತೆಗೂ ನಾಡಪ್ರಭು #ಕೆಂಪೇಗೌಡರ 514 ನೇ ಜನ್ಮ ದಿನದ ಶುಭಾಶಯಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ, ಆದರೆ ಇಲ್ಲಿ ಇಂದು ಯಾವುದೇ ರೀತಿಯ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವಂತಹ ಸಂಭ್ರಮ ಸಡಗರ ನಮಗೆ ಕಾಣುತ್ತಿಲ್ಲ, ನಮ್ಮ ಬೆಂಗಳೂರು ನಗರವನ್ನು ಕಟ್ಟಿದಂತಹ ನಮ್ಮ ಕೆಂಪೇಗೌಡರ ಜಯಂತಿಯನ್ನು ಇಲ್ಲಿ ಯಾವ ರೀತಿ ಮಾಡಬೇಕಿತ್ತು, ಇಡೀ ಜಗತೇ ತಿರುಗಿ ನೋಡುವಂತಹ ಕಾರ್ಯಕ್ರಮ ಆಯೋಜಿಸಬೇಕಿತ್ತು ಅಲ್ಲವೇ, ಇಲ್ಲಿ ಏನು ನೆಡೆಯುತ್ತಿದೆ ಈ ರೀತಿ ಕಳಪೆಯಾಗಿ ಅವರ ಜಯಂತಿಯನ್ನು ಆಚರಿಸುವುದನ್ನು ಪ್ರಪಂಚ ನೋಡಬೇಕೆ, ಪ್ರಗತಿಯ ಪ್ರತಿಮೆ ಇರುವ ಜಾಗದಲ್ಲಿ ಯಾವ ರೀತಿಯ ಆದರ್ಶದ ಜಯಂತೋತ್ಸವ ನೆಡೆಯಬೇಕಿತ್ತು #dcm ಅವರೇ, ಇನ್ನೂ ಹೆಬ್ಬಾಳ ಮೇಲ್ಸೇತುವೆ ಬಳಿಯಿರುವ ಅಶ್ವರೂಢ ಕೆಂಪೇಗೌಡರ ಪ್ರತಿಮೆಯ ಆವರಣದ ಸುತ್ತ ಸ್ವಚ್ಛತೆ ಇಲ್ಲದೆ ಪಾಳು ಬಿದ್ದ ಕೊಂಪೆಯಂತಾಗಿರುವ ದೃಶ್ಯವಂತೂ ಮನ ಕಲುಕುವಂತಿತ್ತು, ಕೆಂಪೇಗೌಡ ಜಯಂತಿಯ ಪೂರ್ವಭಾವಿಯಾಗಿ ಬಿಬಿಎಂಪಿ ಈ ಸ್ಥಳದಲ್ಲಿ ಮಾಡಬೇಕಾಗಿದ್ದ ಕಾರ್ಯಗಳೇನು ಇಲ್ಲಿ ಈಗ ಆಗಿರುವುದೇನು ಎಂದು ನೀವೇ ಒಮ್ಮೆ ಯೋಚಿಸಿ ಮಹಾ ಜನರೇ, #ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ವಿಷಯದಲ್ಲಿ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮನಸ್ಥಿತಿ ಯಾವ ಮಟ್ಟಕೆ ಬಂದು ನಿಂತಿದೆ, ಸರ್ಕಾರ ಆಚರಿಸುತ್ತಿರುವ ನಾಡಪ್ರಭು ಕೆಂಪೇಗೌಡರ ಜಯಂತಿಯು ಕೇವಲ ತೋರ್ಪಡಿಕೆಯಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ, ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ಪ್ರಯುಕ್ತ ಕೊಡಿಗೇಹಳ್ಳಿಯಲ್ಲಿ ನೆಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ಅಶ್ವಥ್ ನಾರಾಯಣಗೌಡರು ಕೊಡಿಗೇಹಳ್ಳಿ ಗ್ರಾಮಸ್ತರಾದ ನಾವು ಎಲ್ಲಾರೂ ಸೇರಿ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ, ಕೆಂಪೇಗೌಡರ ತಾಯಿ ಹಾಗೂ ಕೆಂಪೇಗೌಡರ ಧರ್ಮಪತ್ನಿ ನಮ್ಮ ಕೊಡಿಗೇಹಳ್ಳಿ ಗ್ರಾಮದವರು ಎಂಬ ಪ್ರತೀತಿ ಇದೆ, ಆದ ಕಾರಣ ಮುಂದಿನ ದಿನಗಳಲ್ಲಿ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ತುಂಬಾ ವಿಜೃಂಭಣೆಯಿಂದ ಮಾಡಲು ಗ್ರಾಮಸ್ಥರು ಎಲ್ಲರೂ ಸೇರಿ ನಿರ್ಧರಿಸಿದ್ದೇವೆ ಎಂದು ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.

 

]]> https://newsrevolution.in/highlights-of-514th-jayanti-of-nadaprabhu-kempegowda/feed/ 0 811 ಕಾಂಗ್ರೆಸ್ ನ ಶಕ್ತಿ ಯೋಜನೆಯ ಬಗ್ಗೆ ಏನಂದ್ರು ಬ್ಯಾಟರಾಯನಪುರದ ಮಹಿಳೆಯರು https://newsrevolution.in/what-about-congress-shakti-yojana-women-of-batarayanpura/ https://newsrevolution.in/what-about-congress-shakti-yojana-women-of-batarayanpura/#respond Fri, 04 Aug 2023 10:35:10 +0000 https://newsrevolution.in/?p=795 ರಾಜ್ಯದಲ್ಲಿ #ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅವರು 5 ಭರವಸೆ ನೀಡಿದರು, ಅದರಲ್ಲಿ ಮೊದಲನೆಯದಾಗಿ #ಶಕ್ತಿ ಯೋಜನೆ ಜಾರಿಗೆ ತಂದಿದ್ದಾರೆ, ಅದು #ಕರ್ನಾಟಕ ರಾಜ್ಯದ ಎಲ್ಲಾ ಬಸ್ ಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಚಾಲನೆ ನೀಡಿದ್ದಾರೆ , ಇದಕ್ಕೆ ಸಂಬಂಧಿಸಿದಂತೆ ನಮ್ಮ #ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾವ ರೀತಿ ಮಹಿಳೆಯರು ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿಸುವ ಪ್ರಯತ್ನವನ್ನು ನ್ಯೂಸ್ ರೆವೊಲ್ಯೂಷನ್ ಮಾಡುತ್ತಿದೆ, ಈ ಯೋಜನೆಯ ಬಗ್ಗೆ ಮಹಿಳೆಯರ ಅಭಿಪ್ರಾಯಗಳೇನು ಈ ಯೋಜನೆ ಎಷ್ಟು ಸರಿ ಎಷ್ಟು ತಪ್ಪು ಎಂದು ಅವರನ್ನು ಕೇಳಿ ತಿಳಿಯುವ ಪ್ರಯತ್ನವನ್ನು ಮಾಡಲಾಗಿದೆ, ಕೆಲವರು ಇಂಥಾ ಯೋಜನೆಗಳು ನಮಗೆ ಬೇಕಾಗಿಲ್ಲ ಬಸ್ ಗಿಂತ ಮಕ್ಕಳ #ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರೇ, ಇನ್ನೂ ಕೆಲವು ಮಹಿಳೆಯರಿಗೆ ಈ ಯೋಜನೆ ತುಂಬಾ ಉತ್ತಮವಾಗಿದೆ ಮಹಿಳೆಯರಿಗೆ ಹೊರಗೆ ಬಂದು ಕೆಲಸ ಮಾಡುಲು ಅವರ ಸ್ವಂತ ದುಡಿಮೆಯಲ್ಲಿ ತೊಡಗಲು ಇಂಥ ಯೋಜನೆಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

 

]]> https://newsrevolution.in/what-about-congress-shakti-yojana-women-of-batarayanpura/feed/ 0 795 ಕೆಬಿಜಿ ವಿಜಯ ಬ್ಯಾಟರಾಯನಪುರದ ಪ್ರಜ್ಞಾವಂತಿಕೆಗೆ ಸಂದ ಜಯ https://newsrevolution.in/kbg-vijaya-is-a-victory-for-the-wisdom-of-batarayanapura/ https://newsrevolution.in/kbg-vijaya-is-a-victory-for-the-wisdom-of-batarayanapura/#respond Fri, 04 Aug 2023 10:11:46 +0000 https://newsrevolution.in/?p=783 ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮತ್ತೆ 4 ನೇ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಜನತೆಯ ಮನೆ ಗೆದ್ದ ಕೃಷ್ಣ ಬೈರೇಗೌಡರು, ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಸೇರಿ ಗುಂಡಾಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು, ಈ ಬಾರಿಯೂ ಕ್ಷೇತ್ರದಲ್ಲಿ ನನಗೆ ಗೆಲುವು ತಂದುಕೊಟ್ಟ ಎಲ್ಲಾ ಮತದಾರರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದ ಕೆಬಿಜಿ, ನನ್ನ ಮೇಲೆ ನಂಬಿಕೆ ಇಟ್ಟು ಈ ಬಾರಿ ಸಹ ನನಗೆ ಆಶೀರ್ವಾದ ಮಾಡಿದ ನಿಮ್ಮಗೆ ನಾನು ಋಣಿಯಾಗಿದ್ದೇನೆ ನಿಮ್ಮ ಜೊತೆಗೆ ಸದಾ ನಾನು ಇರುತ್ತೇನೆ ಎಂದು ತಿಳಿಸಿದರು.

 

]]> https://newsrevolution.in/kbg-vijaya-is-a-victory-for-the-wisdom-of-batarayanapura/feed/ 0 783