ಭದ್ರಪ್ಪ ಲೇಔಟ್ ನ ರಿಂಗ್ ರಸ್ತೆಯಲ್ಲಿ ರೈಲ್ವೆ ಗೇಟ್ ಇರುವುದರಿಂದ ಇಲ್ಲಿ ಬಹಳಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ
1 min readಭದ್ರಪ್ಪ ಲೇಔಟ್ ನ ರಿಂಗ್ ರಸ್ತೆಯಲ್ಲಿ RUB ಅಥವಾ ROB ಇಲ್ಲದೆ manual ರೈಲ್ವೆ ಗೇಟ್ ಇರುವುದರಿಂದ ಇಲ್ಲಿ ಬಹಳಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ, ಸ್ಥಳದಲ್ಲೇ ಟ್ರಾಫಿಕ್ ಪೊಲೀಸ್ ಇದ್ದರೂ ಸಹ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸದೆ ಕಾಲಹರಣ ಮಾಡುತ್ತಿರುವುದು ಕಂಡು ಬಂದಿದೆ, ಸಿಗ್ನಲ್ ನಲ್ಲಿ ಬಿಎಂಟಿಸಿ ಬಸ್ಸುಗಳು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಕೆಲಸ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆಟೋ ಚಾಲಕರು ಹಾಗೂ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ, ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಬಸ್ ಗಳನ್ನು ನಿಲ್ಲಿಸದೆ ಸಿಗ್ನಲ್ ಗಳಲ್ಲಿ ಬಸ್ ಗಳನ್ನು ನಿಲ್ಲಿಸುತ್ತಿರುವುದರಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ, ಕೂಡಲೇ ಬಿಎಂಟಿಸಿ ಬಸ್ ಚಾಲಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಮಾತ್ರ ಬಸ್ ಗಳನ್ನು ನಿಲ್ಲುವಂತೆ ಮೇಲ್ವಿಚಾರಣೆ ಮಾಡುವಂತಾಗಬೇಕು, ಆಗ ಮಾತ್ರ ಈ ಟ್ರಾಫಿಕ್ ಸಮಸ್ಯೆಯನ್ನು ಒಂದು ಹಂತಕ್ಕೆ ಬಗೆಹರಿಸಲು ಸಾಧ್ಯವಾಗಬಹುದು.