ಬೆಳ್ಳಳ್ಳಿಯ ” ಹಸಿಕಸ ” ವಿಲೇವಾರಿ ಘಟಕ ಭವಿಷ್ಯದಲ್ಲಿ ಬ್ಯಾಟರಾಯನಪುರಕ್ಕೆ ಮಾರಕವಾಗಬಹುದೇ..?
1 min readಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರು ವಾರ್ಡ್ ನ ಬೆಳ್ಳಳ್ಳಿ ಯಲ್ಲಿ ಕಸದ ಕರ್ಮಕಾಂಡ, ಬೆಂಗಳೂರಿನ ಸುಮಾರು 180 ಕ್ಕೂ ಹೆಚ್ಚು ವಾರ್ಡ್ ಗಳ ಹಸಿಕಸವನ್ನು ಇಲ್ಲಿ ಹಾಕಲಾಗುತ್ತಿದೆ, ಪ್ರತಿನಿತ್ಯ ಸುಮಾರು 600ಕ್ಕೂ ಹೆಚ್ಚು ಕಸದ ಲಾರಿಗಳು ಇಲ್ಲಿಗೆ ಬರುತ್ತವೆ, ಬೆಳ್ಳಗೆ 7 ಗಂಟೆಯಿಂದ ಮಧ್ಯ ರಾತ್ರಿ 2 ಗಂಟೆಯಾದರು ಕಸವನ್ನು ಆನ್ ಲೋಡ್ ಮಾಡಲು ಆಗದಂತಹ ಪರಿಸ್ಥಿತಿ ಇಲ್ಲಿ ಉಂಟಾಗಿದೆ ಎಂದು ಲಾರಿ ಚಾಲಕರು ತಮ್ಮ ಆಕ್ರೋಶವನ್ನು ಹೊರ ಹಾಕಿದರು, ಚಾಲಕರಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ, ಬೆಳ್ಳಳ್ಳಿ ಕಸದ ಸಮಸ್ಯೆ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗಿ ಇಲ್ಲಿನ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಭವಿಷ್ಯದಲ್ಲಿ ಸೃಷ್ಠಿಸುವ ಮೊದಲು ಇದಕ್ಕೆ ಈಗಿನಿಂದಲೇ ಪರಿಹಾರ ಹುಡುಕುವ ಕೆಲಸ ಆರಂಭಿಸಬೇಕಿದೆ.