ಚಿಕ್ಕಜಾಲದ ಸಂತೆಯಲ್ಲಿ ವ್ಯಾಪಾರದ ಚಿಂತೆಯಲ್ಲಿ
1 min readಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಚಿಕ್ಕಜಾಲದಲ್ಲಿ ಪ್ರತಿ ಗುರುವಾರ ನೆಡೆಯುವ ಸಂತೆಗೆ ವಿಶಿಷ್ಟವಾದ ಹಿನ್ನಲೆಯಿದೆ, ಸುಮಾರು 50 ವರ್ಷಗಳಿಂದ ಇಲ್ಲಿ ಪ್ರತಿ ಗುರುವಾರ #ಸಂತೆ ನಡೆಯುತ್ತ ಬಂದಿದೆ , ಸುತ್ತಮುತ್ತ ಹಳಿಗಳ ಜನರಿಗೆ ಆಹಾರ ಉತ್ಪನ್ನಗಳು,ಮನೆಗೆ ಬೇಕಾದ ಸಾಮಗ್ರಿಗಳು ಹಾಗೂ ಇತರೆ ವಸ್ತುಗಳು ಈ ಸಂತೆಯಲ್ಲಿ ದೊರೆಯುತ್ತವೆ, ಜನರ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸಲು ಆಧುನಿಕ ವ್ಯವಸ್ಥೆಗಳಾದ #ಆನ್ಲೈನ್ ವೇದಿಕೆಗಳು #ಸೂಪರ್ ಮಾರ್ಕೆಟ್ ಗಳು ಇತ್ಯಾದಿಗಳು ತಲೆ ಎತ್ತಿರುವ ಇಂತಹ ಕಾಲಘಟ್ಟದಲ್ಲೂ ಸಹ ಈ ಸಂತೆಯಂಬ ಹಳೆಯ ಪರಂಪರೆ ನಮ್ಮ ಜನರನ್ನು ಈಗಲೂ ಸೆಳೆಯುತ್ತಿರುವುದೇ ವಿಶೇಷವಾಗಿದೆ, ಗ್ರಾಮೀಣ ಭಾರತದ ಆರ್ಥಿಕತೆಗೆ ತನ್ನದೇ ಆದಂತಹ ವಿಶಿಷ್ಟ ಕೊಡುಗೆ ನೀಡುತ್ತಿರುವ ಈ ಸಂತೆಯ ವ್ಯವಸ್ಥೆಗೆ ಆಧುನಿಕ ತಂತ್ರಜ್ಞಾನದ ಬಲ ತುಂಬಿದರೆ ಇವು ಇನ್ನಷ್ಟು ಕ್ರಿಯಾಶೀಲವಾಗಿ ಗ್ರಾಮೀಣ ಜನರ ಅಗತ್ಯಗಳನ್ನು ಪೂರೈಸಬಲ್ಲವು.