ಬಿಜೆಪಿಯ ಅಭ್ಯರ್ಥಿಯ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಎ ರವಿ..!!
1 min read
ಅನಾರೋಗ್ಯದ ಕಾರಣದಿಂದ ಬಿಜೆಪಿಯ ಚುನಾವಣಾ ಪ್ರಚಾರದಿಂದ ಕಾರ್ಯದಿಂದ ದೂರ ಉಳಿದಿದ್ದ ಎ ರವಿ ಇಂದು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆ ಆರಂಭಿಸಿದರು , ಕ್ಷೇತ್ರದ ವಿದ್ಯಾರಣ್ಯಪುರದಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟ ಬಿಜೆಪಿ ಅಭ್ಯರ್ಥಿ, ಪ್ರಚಾರ ಕಾರ್ಯದಲ್ಲಿ ಬೆಂ.ಉ ಜಿಲ್ಲಾಧ್ಯಕ್ಷ ಬಿ ನಾರಾಯಣ್,ಎ ರವಿ ಮತ್ತು ಬಿಜೆಪಿ ಅಭ್ಯರ್ಥಿ ಹೆಚ್ ಸಿ ತಮೇಶ್ ಗೌಡ ಹಾಗೂ ಇತರರು ಭಾಗಿ, ರವಿ ಅವರು ಮಾತನಾಡಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿ ಚುನಾವಣಾ ಕಾರ್ಯವನ್ನು ನಿರ್ವಹಿಸುತ್ತೇವೆ ಎಂದರು, ಕಾಂಗ್ರೆಸ್ ನಾ ಕೃಷ್ಣಬೈರೇಗೌಡರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ ಎಂದ ಬಿ ನಾರಾಯಣ್, ಎ ರವಿ ಅವರ ಆಗಮನದಿಂದ ಎಲ್ಲಾ ಗೊಂದಲಗಳು ಬಗೆಹರಿದಿವೆ ಮುಂದೆ ಜಯದ ಬಾವುಟವನ್ನು ಚುನಾವಣೆಯಲ್ಲಿ ನಾವು ಹಾರಿಸುತ್ತೇವೆ ಎಂಬ ಬಲವಾದ ನಂಬಿಕೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಹೆಚ್ ಸಿ ತಮೇಶ್ ಗೌಡ.