ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಬ್ಯಾಟರಾಯನಪುರ ಬಿಜೆಪಿಯಲ್ಲಿ ಚಕ್ರಪಾಣಿ ಚದುರಂಗ..!
1 min readಬಿಜೆಪಿ ಮುಖಂಡ ಚಕ್ರಪಾಣಿ ನಿವಾಸದಲ್ಲಿ ನೆಡೆದ ಬಿಜೆಪಿ ಕಾರ್ಯಕರ್ತರ ಸಭೆ, ಸಭೆಯಲ್ಲಿ ಭಾಗಿಯಾದ ಬಿಜೆಪಿಯ ಹಿರಿಯ ಮುಖಂಡರಾದ ಎ ರವಿ,ಪಿ ಕೆ ರಾಜಗೋಪಾಲ್,ಅಶ್ವಥನಾರಾಯಣ್ ಗೌಡ ಮತ್ತು ಬಿಜೆಪಿ ಅಭ್ಯರ್ಥಿ ಹೆಚ್ ಸಿ ತಮೇಶ್ ಗೌಡ ಹಾಗೂ ಇತರರು, ಉಪಹಾರದ ನೆಪದಲ್ಲಿ ಬಿಜೆಪಿಯಲ್ಲಿ ತನ್ನ ರಾಜಕೀಯದ ಅಸ್ಥಿತ್ವಕ್ಕಾಗಿ ತಂತ್ರಗಾರಿಕೆ ರೂಪಿಸುತ್ತಿರುವ ಚಕ್ರಪಾಣಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಕೆಲಸ ಮಾಡಿ ಮುಂದಿನ ತನ್ನ ರಾಜಕೀಯದ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಚಿಂತಿಸಿರುವ ಚಕ್ರಪಾಣಿ, 1996ರ ಹಳೆಯ ಯೋಚನೆ ಮತ್ತು ಯೋಜನೆಗಳಿಂದ ಹೊರಬರದ ಚಕ್ರಪಾಣಿ, ಬ್ಯಾಟರಾಯನಪುರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗದ ಹಿನ್ನಲೆಯಲ್ಲಿ ಈ ರೀತಿಯ ಹೊಸ ಆಟಕ್ಕೆ ಮುಂದಾದಂತೆ ಕಾಣುತ್ತಿದೆ, ಬಿಜೆಪಿ ಅಭ್ಯರ್ಥಿಗೆ ದೊಡ್ಡ ಪ್ರಮಾಣವಲ್ಲದ ಹಣಕಾಸಿನ ನೆರವನ್ನು ನೀಡುವ ಮೂಲಕ ತನ್ನ ಹಳೆಯ ರಾಜಕಾರಣವನ್ನು ಮುಂದುವರೆಸಿದ್ದಾರೆ ಎಂಬ ಮಾತುಗಳು ಅಲ್ಲಿ ನೆರದಿದ್ದವರಲ್ಲಿ ಕೇಳಿಬರುತ್ತಿತ್ತು.