ಪತ್ರಿಕೋದ್ಯಮದ ಹಲವು ಆಯಾಮಗಳಲ್ಲಿ ಡಿಜಿಟಲ್ ಪತ್ರಿಕೋದ್ಯಮವು ಒಂದು
ತಂತ್ರಜ್ಞಾನ ಆಧಾರಿತ ಈ ಡಿಜಿಟಲ್ ವೇದಿಕೆಯನ್ನು ಬಳಸಿಕೊಂಡು ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೇಗೆ ಪತ್ರಿಕೋದ್ಯಮ ಚಟುವಟಿಕೆಗಳನ್ನು ಅತ್ಯಂತ ವಿಶ್ವಾಸಾರ್ಹವಾಗಿ ನೆಡೆಸಬಹುದು ಎಂಬ ಅನುಭವವನ್ನು ಪ್ರಾಯೋಗಿಕವಾಗಿ ಪಡೆಯಲು ಸಂಕಲ್ಪಿಸಿ ” ನ್ಯೂಸ್ ರೆವೊಲ್ಯೂಷನ್ ” ಎಂಬ ಡಿಜಿಟಲ್ ವಾಹಿನಿಯನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಆರಂಭಿಸಿ ಕಾರ್ಯಾಚರಣೆ ನೆಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ
ಕಳೆದ ಒಂದು ವರ್ಷದಿಂದ ವೈವಿದ್ಯಮಯವಾದ ನಮ್ಮ ಮಾಧ್ಯಮ ಚಟುವಟಿಕೆಗಳಿಗೆ ಅಭೂತಪೂರ್ವ ಬೆಂಬಲ ನೀಡಿ ಮುಂದಿನ ನಮ್ಮ ಪಯಣಕ್ಕೆ ಉತ್ಸಾಹ ತುಂಬಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ನಮ್ಮ ವೀಕ್ಷಕ ಮಹಾ ಪ್ರಭುಗಳಿಗೆ ನಮ್ಮ ಅನಂತಾನಂತ ಧನ್ಯವಾದಗಳು
ಪತ್ರಿಕೋದ್ಯಮ ಜನತೆಯನ್ನು ಹೊರತುಪಡಿಸಿ ಬೇರೆ ಯಾರ ಹಂಗಿನಲ್ಲೂ ಇರಬಾರದು ಎಂಬುವುದು ನಮ್ಮ ಕಾರ್ಯ ನೀತಿಯಾಗಿದೆ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಸಮಗ್ರವಾಗಿ ಅರಿಯುವ ಹಾಗು ಕ್ಷೇತ್ರದ ನಾಗರಿಕರನ್ನು ಸಂಪರ್ಕಿಸುವ ಮಹೋನ್ನತ ಉದ್ದೇಶವನ್ನು ಹೊಂದಿ ದಿನಕ್ಕೆ 10 ಘಂಟೆಗಳಂತೆ ಸುಮಾರು 20000 ಘಂಟೆಗಳ ಕಾಲ ನಿರಂತರವಾಗಿ ಕ್ಷೇತ್ರ ಪರ್ಯಟನೆ ಮತ್ತು ಕ್ಷೇತ್ರದ ಸುದ್ದಿಗಳನ್ನು ಹೆಕ್ಕಿ ತೆಗೆದು ಜನತೆಗೆ ನೀಡುವ ಕಾರ್ಯಸೂಚಿಯನ್ನು ಹಾಕಿಕೊಂಡಿದ್ದೇವೆ
ಭವಿಷ್ಯದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳ ದಿಕ್ಸೂಚಿಯಾಗುವ ಹಾಗು ಕ್ಷೇತ್ರದಲ್ಲಿ ಪ್ರಬಲವಾದ ನಾಗರಿಕ ಪತ್ರಿಕೋದ್ಯಮವನ್ನು ಜಾರಿಗೆ ತರುವ ಮಹತ್ವಾಕಾಂಕ್ಷೆಯನ್ನು ನಿಮ್ಮ ಈ ನ್ಯೂಸ್ ರೆವೊಲ್ಯೂಷನ್ ತಂಡ ಹೊಂದಿದೆ.
ಈ ಹಿನ್ನಲೆಯಲ್ಲಿ ಕ್ಷೇತ್ರದ ಎಲ್ಲಾ ವರ್ಗದ ಜನತೆಯ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ನಾವು ಬಯಸುತ್ತೇವೆ.