ಹೋಳಿ ಹುಣ್ಣಿಮೆ ವಿಶೇಷ ಬೆಳದಿಂಗಳ ಊಟ ಏರ್ಪಡಿಸಿದ್ದ ನಾರಾಯಣಸ್ವಾಮಿ ( ಮಠ )
1 min readಹೋಳಿ ಹುಣ್ಣಿಮೆ ಪ್ರಯುಕ್ತ ಬೆಳದಿಂಗಳ ಊಟ ಎಂಬಂತಹ ವಿನುತನವಾದ ಕಾರ್ಯಕ್ರಮವನ್ನು ಬಿಜೆಪಿಯ ಹಿರಿಯ ನಾಯಕ ನಾರಾಯಣಸ್ವಾಮಿ ( ಮಠ )ಅವರು ಕೊಡಿಗೇಹಳ್ಳಿಯ ಅವರ ತೋಟದ ಜಮೀನಿನಲ್ಲಿ ಆಯೋಜಿಸಿದ್ದರು, ನಮ್ಮ ಹಿಂದಿನ ಪರಂಪರೆಯಲ್ಲಿ ಹೋಳಿ ಹಬ್ಬದಂದು ಕಾಮನನ್ನು ಸುಟ್ಟ ನಂತರ ಬೆಳದಿಂಗಳ ಬೆಳಕಲ್ಲಿ ಊಟ ಮಾಡುವುದು ಪದ್ಧತಿ.ನಗರೀಕರಣದ ವೇಗಕ್ಕೆ ಸಿಲುಕಿ ನಮ್ಮ ಸಂಸ್ಕೃತಿ ಮರೆಮಾಚಿ ಹೋಗುತ್ತಿದೆ.ಈ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಕಾರ್ಯಕ್ರಮದಲ್ಲಿ ಸರಿಸುಮಾರು 1,500 ಜನ ಸೇರುವ ಸಾಧ್ಯತೆಗಳಿವೆ ಎಲ್ಲರಿಗೂ ಸಹ ಸಿಹಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು, ಕೊಡಿಗೇಹಳ್ಳಿ ಗ್ರಾಮದಲ್ಲಿರುವ ನಾರಾಯಣಸ್ವಾಮಿ ( ಮಠ ) ಅವರ ಜಮೀನಿನಲ್ಲಿ ಕಳೆದ ನಾಲ್ಕು ವರ್ಷದಿಂದಲೂ ಈ ಹಬ್ಬವನ್ನು ಮಾಡಿಕೊಂಡು ಬರಲಾಗುತ್ತಿದೆ.