ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಸ್ಕಾಂ ಕರ್ಮಕಾಂಡ…!
1 min read
ಬ್ಯಾಟರಾಯನಪುರ ಕ್ಷೇತ್ರದ ಎನ್ ಟಿ ಐ ಬಡಾವಣೆಯ 2 ನೇ ಹಂತದಲ್ಲಿ ರೈಲ್ವೆ ಪ್ಯಾರ್ಲಲ್ ರಸ್ತೆಯಲ್ಲಿ ಇರುವಂತಹ ಪಾರ್ಕ್ ಜಾಗದಲ್ಲಿ ಬೆಸ್ಕಾಂ ನವರು 11 ಕಿ.ವಿ. ಯು ಜೀ ಕೇಬಲ್ ನ್ನು ಹಾಕುತ್ತಿದ್ದಾರೆ, ರೂಲ್ಸ್ ಪ್ರಕಾರ ಯು.ಜಿ. ಕೇಬಲ್ ರಸ್ತೆಯ ಜಾಗದಲ್ಲಿ ಅಳವಡಿಸಬೇಕು.ಆದರೆ ಸಾರ್ವಜನಿಕರ ಬಳಕೆಗೆಂದು ಮೀಸಲಿಟ್ಟ ಪಾರ್ಕ್ ಜಾಗದಲ್ಲೇ ಅಳವಡಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಎನ್.ಟಿ.ಐ ಸೊಸೈಟಿಯು ಈ ಬಡಾವಣೆಯನ್ನು ನಿರ್ಮಾಣ ಮಾಡಿದು, ಈ ಜಾಗವನ್ನು ಪಾರ್ಕ್ ಗೆ ಮೀಸಲ್ಲಿಟ್ಟಿದೆ, ಸ್ಥಳೀಯರ ಪ್ರಕಾರ ಈ ಜಾಗವು ರೈಲ್ವೆ ಹಾಗು ಎನ್.ಟಿ.ಐ ಸೊಸೈಟಿಯ ಮಧ್ಯ ಕೋರ್ಟ್ ನಲ್ಲಿ ಪ್ರಕಾರಣ ಇರುತ್ತದೆ, ಇನ್ನು ಪ್ರಕರಣ ಇತ್ಯರ್ಥ ಹಾಗದೆ ಇರುವಾಗ ಇಲ್ಲಿ ಕಾಮಗಾರಿ ಮಾಡಬಾರದು ಎಂದು ಸಾರ್ವಜನಿಕರ ಒತ್ತಾಯ. ಸ್ಥಳೀಯರ ಪ್ರಕಾರ ಈ ಜಾಗದಲ್ಲಿ ಪಾರ್ಕ್ ನಿರ್ಮಾಣವಾದರೆ ಇಲ್ಲಿ ಹಾಕಿರುವಂತಹ ಕೇಬಲ್ ಗಳಿಂದ ಮುಂದೆ ಸಾರ್ವಜನಿಕರಿಗೆ ತೊಂದರೆ ಯಾಗುತ್ತದೆ ಹಾಗು ಪಾರ್ಕ್ ನಲ್ಲಿ ಗಿಡ ಮರಗಳನ್ನು ಬೆಳೆಸುವುದರಿಂದ ಮುಂದಿನ ದಿನಗಳಲ್ಲಿ ಕರೆಂಟ್ ಶಾಕ್ ಅಥವ ಗ್ರೌಂಡಿಂಗ್ ಹಾಗುವ ಸಾಧ್ಯತೆ ಗಳು ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದಾರೆ.