August 4, 2023

High court PIL ನ ಅರ್ಥ ಮಾಡಿಕೊಳ್ಳದ ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್

1 min read

ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿ ಗ್ರಾಮಗಳ ಮಧ್ಯ ಬರುವ ಸರ್ಕಾರಿ ಜಾಗದ ಒತ್ತುವರಿ ಕುರಿತಂತೆ ಘನ ಉಚ್ಚ ನ್ಯಾಯಾಲಯದ ಆದೇಶದ ಪಾಲನೆ ಮಾಡಲು ತಾಲ್ಲೂಕು ಆಡಳಿತದ ಸಿದ್ಧತೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಸ್ ರೆವೊಲ್ಯೂಷನ್ ಗೆ ಪ್ರತಿಕ್ರಿಯೆ ನೀಡಿದ ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲ ವಿಷಯವನ್ನು ಮರೆಮಾಚುವ ಪ್ರಯತ್ನ ಅಥವಾ ಮೂಲ ವಿಷಯವನ್ನು ಗ್ರಹಿಸದ ತಹಶೀಲ್ದಾರ್, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಸಮುದಾಯಗಳಿಗೆ ಸ್ಮಶಾನಕ್ಕಾಗಿ 1 ಎಕರೆ,30 ಗುಂಟೆ ಸಾರ್ವಜನಿಕ ಆಟದ ಮೈದಾನಕ್ಕೆ ಹಾಗೂ 10 ಗುಂಟೆ ಸಾರ್ವಜನಿಕ ಗ್ರಂಥಾಲಯಕ್ಕಾಗಿ ಒಟ್ಟು 2 ಎಕರೆ ಸರ್ಕಾರಿ ಜಮೀನನ್ನು 2001-2002 ರಲ್ಲಿ ಮಂಜೂರು ಮಾಡಲಾಗಿತ್ತು, ಈ ಮಂಜೂರಾದ ಜಮೀನನ್ನು ಒತ್ತುವರಿ ಮಾಡಿದ ಖಾಸಗಿ ವ್ಯಕ್ತಿಗಳು ಮತ್ತು ಇದಕ್ಕೆ ಸಹಕರಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕೊಡಿಗೇಹಳ್ಳಿಯ ನಿವಾಸಿ ಅಶ್ವಥ್ ನಾರಾಯಣ್ ಗೌಡ ಎಂಬುವವರು ಹೈ ಕೋರ್ಟ್ ನಲ್ಲಿ PIL ನ್ನು 2007 ರಲ್ಲಿ ದಾಖಲಿಸಿದರು, ಈ ವಿಷಯಕ್ಕೆ ಅನುಗುಣವಾಗಿಯೇ ಮಾನ್ಯ ನ್ಯಾಯಾಲಯ ತನ್ನ ಆದೇಶವನ್ನು ನೀಡಿದೆ, ಆದರೆ ತಹಶೀಲ್ದಾರ್ ಅವರು ಮಂಜೂರಾತಿ ವಿಷಯವನ್ನು ಬಿಟ್ಟು NTI ಬಡಾವಣೆಯ ಭೂ ಸ್ವಾಧೀನ ವಿಷಯವನ್ನು ಎಳೆದು ಮುಂದೆ ತರುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

 

About Author

Leave a Reply

Your email address will not be published. Required fields are marked *