ಬಂಡಾಯದ ಬೆಂಕಿಯಲ್ಲಿ ಬ್ಯಾಟರಾಯನಪುರ ಬಿಜೆಪಿ !
1 min readಬ್ಯಾಟರಾಯನಪುರ ಬಿಜೆಪಿಯಲ್ಲಿ ಸ್ಫೋಟಗೊಂಡ ಬಂಡಾಯದ ಬೆಂಕಿ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಮುನೀಂದ್ರ ಕುಮಾರ್ ಮತ್ತು ಎ ರವಿ ಅವರ ಬೆಂಬಲಿಗರು ಮತ್ತು ಅನುಯಾಯಿಗಳಿಂದ ತಮೇಶ್ ಗೌಡರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ನೆಡೆಸಿದರು, ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಛೇರಿಯಲ್ಲಿ ಸಾವಿರಾರು ಕಾರ್ಯಕರ್ತರು ಸ್ವಯಂ ಘೋಷಿತವಾಗಿ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ, ಅಭ್ಯರ್ಥಿಯನ್ನು ಆಯ್ಕೆಗೆ ಯಾವ ಮಾನದಂಡದ ಮೇಲೆ ತಮ್ಮೇಶ್ ಗೌಡರಿಗೆ ಕೊಟ್ಟಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು, ಪಕ್ಷದ ಅಧಿಕೃತ ಅಭ್ಯರ್ಥಿ ತಮೇಶ್ ಗೌಡರಿಗೆ ಈ ಬಂಡಾಯದ ಬಿಸಿ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಬಹುದು ಎಂದು ಕಾದು ನೋಡಬೇಕಿದೆ.