May 1, 2024

ಬಾಗಲೂರಿನಲ್ಲಿ ನೆಡೆದ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪ್ರಾದೇಶಿಕ ಸಮಾವೇಶ

1 min read

ಬಾಗಲೂರಿನಲ್ಲಿ ನೆಡೆದ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪ್ರಾದೇಶಿಕ ಸಮಾವೇಶ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಬಾಗಲೂರು ನವೋದಯ ವಿದ್ಯಾಲಯ ಆಟದ ಮೈದಾನದಲ್ಲಿ ಇಂದು #ನವೋದಯ ವಿದ್ಯಾಲಯ ಹೈದರಾಬಾದ್ ಸಮಿತಿ ವತಿಯಿಂದ ಸಮ್ಮಿಲನ ಕಾರ್ಯಕ್ರಮ ಮಾಡಲಾಗಿತ್ತು, ಬೆಂಗಳೂರು ನಗರ ಜಿಲ್ಲೆಯ ಜವಹಾರ ನವೋದಯ ವಿದ್ಯಾಲಯ ಜವಾಬ್ದಾರಿ ಹೊಂದಿತ್ತು, ಕಾರ್ಯಕ್ರಮದಲ್ಲಿ 77 ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಕರ್ನಾಟಕ ಕೇರಳ ಆಂಧ್ರಪ್ರದೇಶ ತೆಲಂಗಾಣ ಲಕ್ಷದೀಪ ಅಂಡಮಾನ್ ಮತ್ತು ನಿಕೋಬಾರ್ ಈ ಎಲ್ಲಾ ಭಾಗದಲ್ಲಿ ಜವಹಾರ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳು ನವೋದಯ ಎಂಬಂತಹ ವಿದ್ಯಾಲಯ ಇರೋದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ನವೋದಯದಲ್ಲಿ ಓದಿದಂತ ವಿದ್ಯಾರ್ಥಿಗಳು ಈಗ #ಡಾಕ್ಟರ್ ಇಂಜಿನಿಯರ್ ಜಿಲ್ಲಾಧಿಕಾರಿ #ಪೊಲೀಸ್ ಅಧಿಕಾರಿಗಳು ಸಮಾಜಕ್ಕೆ ಕೊಡುಗೆ ಕೊಡುವುದರಲ್ಲಿ ನವೋದಯ ವಿದ್ಯಾಲಯವು ಮುಂದಾಗಿದೆ ಎಂದು ತಮ್ಮ ಅಭಿಪ್ರಾಯ ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.

 

About Author

Leave a Reply

Your email address will not be published. Required fields are marked *

You may have missed