August 5, 2023

ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ವಿಶೇಷತೆಗಳು

1 min read

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಜನತೆಗೂ ನಾಡಪ್ರಭು #ಕೆಂಪೇಗೌಡರ 514 ನೇ ಜನ್ಮ ದಿನದ ಶುಭಾಶಯಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ, ಆದರೆ ಇಲ್ಲಿ ಇಂದು ಯಾವುದೇ ರೀತಿಯ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವಂತಹ ಸಂಭ್ರಮ ಸಡಗರ ನಮಗೆ ಕಾಣುತ್ತಿಲ್ಲ, ನಮ್ಮ ಬೆಂಗಳೂರು ನಗರವನ್ನು ಕಟ್ಟಿದಂತಹ ನಮ್ಮ ಕೆಂಪೇಗೌಡರ ಜಯಂತಿಯನ್ನು ಇಲ್ಲಿ ಯಾವ ರೀತಿ ಮಾಡಬೇಕಿತ್ತು, ಇಡೀ ಜಗತೇ ತಿರುಗಿ ನೋಡುವಂತಹ ಕಾರ್ಯಕ್ರಮ ಆಯೋಜಿಸಬೇಕಿತ್ತು ಅಲ್ಲವೇ, ಇಲ್ಲಿ ಏನು ನೆಡೆಯುತ್ತಿದೆ ಈ ರೀತಿ ಕಳಪೆಯಾಗಿ ಅವರ ಜಯಂತಿಯನ್ನು ಆಚರಿಸುವುದನ್ನು ಪ್ರಪಂಚ ನೋಡಬೇಕೆ, ಪ್ರಗತಿಯ ಪ್ರತಿಮೆ ಇರುವ ಜಾಗದಲ್ಲಿ ಯಾವ ರೀತಿಯ ಆದರ್ಶದ ಜಯಂತೋತ್ಸವ ನೆಡೆಯಬೇಕಿತ್ತು #dcm ಅವರೇ, ಇನ್ನೂ ಹೆಬ್ಬಾಳ ಮೇಲ್ಸೇತುವೆ ಬಳಿಯಿರುವ ಅಶ್ವರೂಢ ಕೆಂಪೇಗೌಡರ ಪ್ರತಿಮೆಯ ಆವರಣದ ಸುತ್ತ ಸ್ವಚ್ಛತೆ ಇಲ್ಲದೆ ಪಾಳು ಬಿದ್ದ ಕೊಂಪೆಯಂತಾಗಿರುವ ದೃಶ್ಯವಂತೂ ಮನ ಕಲುಕುವಂತಿತ್ತು, ಕೆಂಪೇಗೌಡ ಜಯಂತಿಯ ಪೂರ್ವಭಾವಿಯಾಗಿ ಬಿಬಿಎಂಪಿ ಈ ಸ್ಥಳದಲ್ಲಿ ಮಾಡಬೇಕಾಗಿದ್ದ ಕಾರ್ಯಗಳೇನು ಇಲ್ಲಿ ಈಗ ಆಗಿರುವುದೇನು ಎಂದು ನೀವೇ ಒಮ್ಮೆ ಯೋಚಿಸಿ ಮಹಾ ಜನರೇ, #ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ವಿಷಯದಲ್ಲಿ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮನಸ್ಥಿತಿ ಯಾವ ಮಟ್ಟಕೆ ಬಂದು ನಿಂತಿದೆ, ಸರ್ಕಾರ ಆಚರಿಸುತ್ತಿರುವ ನಾಡಪ್ರಭು ಕೆಂಪೇಗೌಡರ ಜಯಂತಿಯು ಕೇವಲ ತೋರ್ಪಡಿಕೆಯಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ, ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ಪ್ರಯುಕ್ತ ಕೊಡಿಗೇಹಳ್ಳಿಯಲ್ಲಿ ನೆಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ಅಶ್ವಥ್ ನಾರಾಯಣಗೌಡರು ಕೊಡಿಗೇಹಳ್ಳಿ ಗ್ರಾಮಸ್ತರಾದ ನಾವು ಎಲ್ಲಾರೂ ಸೇರಿ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ, ಕೆಂಪೇಗೌಡರ ತಾಯಿ ಹಾಗೂ ಕೆಂಪೇಗೌಡರ ಧರ್ಮಪತ್ನಿ ನಮ್ಮ ಕೊಡಿಗೇಹಳ್ಳಿ ಗ್ರಾಮದವರು ಎಂಬ ಪ್ರತೀತಿ ಇದೆ, ಆದ ಕಾರಣ ಮುಂದಿನ ದಿನಗಳಲ್ಲಿ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ತುಂಬಾ ವಿಜೃಂಭಣೆಯಿಂದ ಮಾಡಲು ಗ್ರಾಮಸ್ಥರು ಎಲ್ಲರೂ ಸೇರಿ ನಿರ್ಧರಿಸಿದ್ದೇವೆ ಎಂದು ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.

 

About Author

Leave a Reply

Your email address will not be published. Required fields are marked *