ಅಕ್ರಮವೋ..? ಸಕ್ರಮವೋ….?
1 min read
ಅಗ್ರಹಾರ ಬಡಾವಣೆಯ ಬಿಜೆಪಿ ಮುಖಂಡನ ಮನೆಯ ಪ್ರಕರಣ ಚುನಾವಣೆಯ ಅಕ್ರಮವೋ..? ಸಕ್ರಮವೋ….? ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬ ದೂರಿನ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ಜಕ್ಕೂರು ವಾರ್ಡ್ ನ ಅಗ್ರಹಾರ ಬಡಾವಣೆಯಲ್ಲಿರುವ S L V ಎಂಟರ್ಪ್ರೈಸಸ್ ಎಂಬ ಕಛೇರಿಯ ಮೇಲೆ ದಾಳಿ ನಡೆಸಿದರು, ಬಿಜೆಪಿ ಮುಖಂಡ ಮುನಿರಾಜು ಎಂಬುವವರ ಮನೆಯಲ್ಲಿ ಸುಮಾರು 2500 ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ, ಬಿಜೆಪಿ ಮುಖಂಡ ಮುನಿರಾಜು ಬ್ಯಾಟರಾಯನಪುರ ಬಿಜೆಪಿಯ ಕ್ಷೇತ್ರ ಮಟ್ಟದ ಬೂತ್ ಲೆವೆಲ್ ಏಜೆಂಟ್ ಹಾಗೂ ನೇಕಾರ ವೃತ್ತಿಗೆ ಸಂಬಂಧಿಸಿದ ಸೀರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ, ಮತದಾರರ ಗುರುತಿನ ಚೀಟಿಯನ್ನು ನಕಲು ಮಾಡುತ್ತಿರುವುದರ ಬಗ್ಗೆ ಆರೋಪಗಳು ಕೇಳಿ ಬಂದಿವೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಬಿ ಜೆ ಪಿ ಮುಖಂಡ ಮುನಿರಾಜು ಅವರು ನ್ಯೂಸ್ ರೆವೊಲ್ಯೂಷನ್ ದಿ ವಾಲ್ ಆಫ್ ಬ್ಯಾಟರಾಯನಪುರದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.