ಪ್ರೆಸ್ ಮೀಟ್ ನಲ್ಲಿ ಬಿಜೆಪಿಯ ಸಂಘಟನೆಯ ಬಗ್ಗೆ ವ್ಯಂಗ್ಯವಾಡಿದ ಜೆಡಿ ಎಸ್ ನ ಅಂಬಿಕಾ ಮಣಿ..!
1 min read
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಗರಾಜ್ ಗೌಡ ಪಿ ರವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ, ಬದಲಾವಣೆಯಾದ ಜೆಡಿಎಸ್ ಅಬ್ಯರ್ಥಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಜೆಡಿಎಸ್ ಮುಖಂಡರಾದ ಅಂಬಿಕಾ ಮಣಿ, ಅಂಬಿಕಾ ಮಣಿ ನಿವಾಸದಲ್ಲಿ ಭಾಗವಹಿಸಿದ ಹಲವಾರು ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು, ಈ ಹಿಂದೆ ಜೆಡಿಎಸ್ ಅಭ್ಯರ್ಥಿ ಆಗಿದ್ದ ಏನ್ ವೇಣುಗೋಪಾಲ್ ಅವರ ಧಿಡೀರ್ ಬದಲಾವಣೆಯಿಂದ ಖುಷಿಗೊಂಡಿರುವ ಅಂಬಿಕಾ ಮಣಿ, ನಾಳೆಯೇ ಚುನಾವಣಾ ಪ್ರಚಾರವನ್ನು ನಾವು ಪ್ರಾರಂಭ ಮಾಡುತ್ತೇವೆ ಪ್ರಚಾರಕ್ಕೆ ಬೇಕಾದರೆ ಬಾಲಿವುಡ್ ನಿಂದ ಬೇಕಾದರೂ ಸ್ಟಾರ್ ಸೆಲೆಬ್ರಿಟಿ ಗಳನ್ನು ಸಹ ಚುನಾವಣಾ ಪ್ರಚಾರಕ್ಕೆ ಕರೆಸುತ್ತೇನೆ ಎಂದು ತಿಳಿಸಿದ ಅಂಬಿಕಾ ಮಣಿ, ಈ ಬಾರಿ ಕ್ಷೇತ್ರದಲ್ಲಿ ನಾವು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ತಿಳಿಸಿದ ಅಂಬಿಕಾ ಮಣಿ ಮತ್ತು ಜೆಡಿಎಸ್ ಅಭ್ಯರ್ಥಿ ನಾಗರಾಜು ಗೌಡ ಪಿ, ಈ ಸಂದರ್ಭದಲ್ಲಿ ಹೊಸ ಜೆಡಿಎಸ್ ಅಭ್ಯರ್ಥಿಗೆ ಸಾಥ್ ನೀಡಿದ ಕೊಡಿಗೇಹಳ್ಳಿ ಜೆಡಿಎಸ್ ಮುಖಂಡರಾದ ಎಂ ಉಮೇಶ್ ಗೌಡ,ತಿಂಡ್ಲು ನಿವಾಸಿ ಬಾಬು ಹಾಗೂ ಇತರರು.