ಬ್ಯಾಟರಾಯನಪುರದಲ್ಲಿ ಜೆಡಿಎಸ್ ಆಟ ರಾಷ್ಟ್ರೀಯ ಪಕ್ಷಗಳಿಗೆ ಸಂಕಟ
1 min read
ಹೆಗಡೆ ನಗರ ಹಾಗೂ ಕೆ ಜಿ ಎನ್ ಬಡಾವಣೆ ಮಾರ್ಗದಲ್ಲಿ ಬ್ಯಾಟರಾಯನಪುರ ಜೆಡಿಎಸ್ ಅಭ್ಯರ್ಥಿಯಾದ ನಾಗರಾಜ ಗೌಡ ಅವರು ಹಾಗೂ ವೇಣು ಗೋಪಾಲ್ ಗೌಡ ಮತ್ತು ಕಾರ್ಯಕರ್ತರು ರೋಡ್ ಶೋ ಮಾಡುವ ಮೂಲಕ ಮತ ಯಾಚನೆ ಮಾಡಿದರು, ಹಲವಾರು ಕಾರ್ಯಕರ್ತರು ಮತ್ತು ಮಹಿಳೆಯರು ಮತಯಾಚನೆ ಮಾಡುತ್ತಾ ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಅವಕಾಶ ನೀಡಿ ಎಂದು ಕೇಳಿದರು, ನಾಗರಾಜು ಗೌಡ ಮಾತನಾಡಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದೆ ಇರುವ ಶಾಸಕ ಕೃಷ್ಣಭೈರೇಗೌಡ ಸಾಕು ಬದಲಾವಣೆ ಬೇಕು ಎಂದು ಜನ ಬಯಸುತ್ತಿದ್ದಾರೆ ಹಾಗಾಗಿ ಈ ಬಾರಿ ಜೆಡಿಎಸ್ ಗೆ ಒಳ್ಳೆ ಅವಕಾಶವಿದೆ ಎಂದರು, ಈ ಬಾರಿ ನನಗೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿ ಕ್ಷೇತ್ರದಲ್ಲಿ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.