ಬ್ಯಾಟರಾಯನಪುರ ಬಿಜೆಪಿಯ ಏಕಾತ್ಮ ಮಂದಿರದಲ್ಲಿ ನೆಡೆದ ” ಬಿಜೆಪಿಯ 43ನೇ ಸಂಸ್ಥಾಪನಾ ದಿನದ ಸಂಭ್ರಮ “
1 min readಬ್ಯಾಟರಾಯನಪುರ ಬಿಜೆಪಿಯ ಏಕಾತ್ಮ ಮಂದಿರದಲ್ಲಿ ನೆಡೆದ ” ಬಿಜೆಪಿಯ 43ನೇ ಸಂಸ್ಥಾಪನಾ ದಿನದ ಸಂಭ್ರಮ ” ಬಿಜೆಪಿಯ 43 ನೇ ಸಂಸ್ಥಾಪನಾ ದಿನವನ್ನು ಸಹಕಾರ ನಗರದ ಏಕಾತ್ಮ ಮಂದಿರದಲ್ಲಿ ಆಚರಿಸಿದ ಬ್ಯಾಟರಾಯನಪುರ ಬಿಜೆಪಿ, ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ಅರುಣ್ ಸಿಂಗ್ ಭಾಗಿ, ಬ್ಯಾಟರಾಯನಪುರ ವಿಧಾನಸಭೆಯ ಬಿ ಜೆ ಪಿ ಯ ಸಂಭಾವ್ಯ ಅಭ್ಯರ್ಥಿಗಳ ಸಮ್ಮುಖದಲ್ಲಿ ನೆಡೆದ ಬಿಜೆಪಿ ಸಂಸ್ಥಾಪನಾ ದಿನದ ಆಚರಣೆಯ ಕಾರ್ಯಕ್ರಮ, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಪಕ್ಷ ಬಿಜೆಪಿ, ಬಿಜೆಪಿಯ ಈ ಬೆಳವಣಿಗೆಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ” ಏಕಾತ್ಮ ಮಾನವತಾವಾದ ” ಮತ್ತು ” ಅಂತ್ಯೋದಯ ” ಎಂಬ ವಿಶಿಷ್ಟ ಪರಿಕಲ್ಪನೆಯ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಎಲ್ಲಾ ನಾಯಕರು ಶ್ರಮಿಸುತ್ತಿರುವುದೇ ಕಾರಣವಾಗಿದೆ, ಬ್ಯಾಟರಾಯನಪುರ ಬಿಜೆಪಿಯು ಸಹ ಇದೆ ತತ್ವದ ಆಧಾರದ ಮೇಲೆ ತನ್ನ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿ ಈ ಚುನಾವಣೆಯಲ್ಲಿ ಗೆಲುವಿನ ವ್ಯೂಹ ರಚಿಸಿದೆ ಎಂದು ಹೇಳಲಾಗುತ್ತಿದೆ, ಈ ಬಾರಿ ಬ್ಯಾಟರಾಯನಪುರ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರು ಕಾಂಗ್ರೆಸ್ ನ ಕೃಷ್ಣ ಬೈರೇಗೌಡರಿಗೆ ಸೋಲು ಖಚಿತ ಎಂಬ ವಾತಾವರಣ ಸೃಷ್ಠಿಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರಿತ್ತಿದೆ.