ಬ್ಯಾಟರಾಯನಪುರದಲ್ಲಿ ಚುನಾವಣೆಯ ಅಕ್ರಮಗಳನ್ನು ತಡೆಯಲು ತೆರೆದಿರುವ ಚೆಕ್ ಪೋಸ್ಟ್ ಗಳು
1 min readವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಚುನಾವಣೆಯ ಅಕ್ರಮಗಳನ್ನು ತಡೆಗಟ್ಟಲು ಒಟ್ಟು 8 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ, ಅಮೃತಹಳ್ಳಿ ಪೋಲೀಸ್ ಸ್ಟೇಷನ್ ವ್ಯಾಪ್ತಿ ಯಲ್ಲಿ 2 ಚೆಕ್ ಪೋಸ್ಟ್ ಗಳು, ಸಂಪಿಗೆ ಹಳ್ಳಿ ಪೋಲೀಸ್ ಸ್ಟೇಷನ್ ವ್ಯಾಪ್ತಿ ಯಲ್ಲಿ 3 ಚೆಕ್ ಪೋಸ್ಟ್ ಗಳು, ವಿದ್ಯಾ ರಣ್ಯಪುರ ಪೋಲೀಸ್ ಸ್ಟೇಷನ್ ವ್ಯಾಪ್ತಿ ಯಲ್ಲಿ 1ಚಕ್ ಪೋಸ್ಟ್ ಹಾಗೂ ಕೊಡಿಗೇಹಳ್ಳಿ ಪೋಲೀಸ್ ಸ್ಟೇಷನ್ ವ್ಯಾಪ್ತಿ ಯಲ್ಲಿ 1 ಚೆಕ್ ಪೋಸ್ಟ್ ಗಳುನ್ನು ಸ್ಥಾಪಿಸಲಾಗಿದೆ, ಪ್ರತಿ ಚೆಕ್ ಪೋಸ್ಟಿಗೂ ಒಬ್ಬರು ಚುನಾವಣಾ ಅಧಿಕಾರಿ ಹಾಗೂ ಇಬ್ಬರು ಪೋಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಇವರನ್ನು ಮೂರು ಪಾಳಿಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ, ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ವಾಹನ ತಪಾಸಣೆ ಮಾಡಿ ಅನುಮಾನ ಬಂದ ವಾಹನಗಳನ್ನು ಪರಿಶೀಲನೆ ನೆಡಸಿ ಅಕ್ರಮಗಳನ್ನು ತಡೆಯುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗದಿಂದ ಮಾಡಲಾಗುತ್ತಿದೆ, ಕ್ಷೇತ್ರದಲ್ಲಿ ಚುನಾವಣೆಯ ಪ್ರಯುಕ್ತ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಗಳ ರಿಯಾಲಿಟಿ ಚೆಕ್ ಮಾಡುವ ಪ್ರಯತ್ನವನ್ನು ನ್ಯೂಸ್ ರೆವೊಲ್ಯೂಷನ್ ದಿ ವಾಲ್ ಆಫ್ ಬ್ಯಾಟರಾಯನಪುರ ಮಾಡಿದೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಆದರೂ ಸಹಾ ಯಾವುದೇ ಹಣ ಅಥವಾ ಮತದಾರರಿಗೆ ಹಂಚಲು ಗಿಫ್ಟ್ ಗಳು ಹಾಗೂ ಮದ್ಯವನ್ನು ಅಕ್ರಮವಾಗಿ ಸಾಗಿಸುವುದನ್ನು ತಡೆಯಲು ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಸಜ್ಜಾಗಿದೆ.