ಅಂಗೈಯಲ್ಲಿ ಕರೆಂಟ್..! ಅಂಡರ್ ಪಾಸ್ ನಲ್ಲಿ ಹಾವು..!
1 min readಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಜಕ್ಕೂರಿನಲ್ಲಿ ಇಂದು ಬೆಳ್ಳಗೆ ಸುರಿದ ಭಾರಿ ಮಳೆಯಿಂದಾಗಿ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ವಾಹನ ಸಂಚಾರ ಮಾಡಲು ತುಂಬಾ ಕಷ್ಟ ಆಗುತ್ತಿತ್ತು ಇದೆ ಸಮಯದಲ್ಲಿ ಈ ಅಂಡರ್ ಪಾಸ್ ನೀರಿನಲ್ಲಿ ಒಂದು ಹಾವು ಕಾಣಿಕೊಂಡು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಸುಮಾರು ವರ್ಷಗಳಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೆ ಅಲ್ಲಿ ವಾಸಿಸುವ ಜನರು ಇಡೀ ಶಾಪ ಹಾಕುತ್ತಿದ್ದಾರೆ, ಈ ಅಂಡರ್ ಪಾಸ್ ಯಲಹಂಕಕ್ಕೆ ಹೋಗಿ ಬರುವ ಮಾರ್ಗವಾಗಿದೆ ಇಲ್ಲಿ ಸಾವಿರಾರು ಜನರು ಈ ಅಂಡರ್ ಪಾಸ್ ಮಾರ್ಗವನ್ನು ಬಳಸುತ್ತಿದ್ದಾರೆ, ನಂತರ ಅಂಡರ್ ಪಾಸ್ ನಲ್ಲಿ ಶೇಖರಣೆಗೊಂಡಿದ್ದ ನೀರನ್ನು ಹೊರಗೆ ಹಾಕಲು ಬಂದ ಬಿಬಿಎಂಪಿಯವರು ಮೊದಲು ಹಾವನ್ನು ರಕ್ಷಣೆ ಮಾಡಿ ನಂತರ ಪಂಪ್ ಮಾಡುವ ಮೂಲಕ ನೀರನ್ನು ಹೊರ ಹಾಕಿದರು, ಮಾನ್ಯ ಕೃಷ್ಣ ಭೈರೇಗೌಡರು ಈ ಸಮಸ್ಯೆಯನ್ನು ಅತೀ ಬೇಗನೆ ಬಗೆಹರಿಸಿ ಕೊಡಬೇಕು ಎಂದು ಅಲ್ಲಿನ ಜನರು ಒತ್ತಾಯ ಮಾಡುತ್ತಿದ್ದಾರೆ, ಇದೇ ಸಂದರ್ಭದಲ್ಲಿ ಯಲಹಂಕಕ್ಕೆ ಹೋಗುವ #ಮೇಲ್ಸೇತುವೆ ಕೆಲಸ ಅರ್ಧಕ್ಕೆ ನಿಂತಿದೆ ಆದರೆ ಈ ಮೇಲ್ಸೇತುವೆಯ ಪಕ್ಕದಲ್ಲಿ ಬೆಸ್ಕಾಂನವರು ಕೆಲವು ವಿದ್ಯುತ್ ಕೇಬಲ್ ಗಳನ್ನು ಕೈ ಸಿಗುವಂತೆ ಹಾಕಿದ್ದಾರೆ ಅದು ಮಳೆ ನೀರು ಬಂದಾಗ ತುಂಬಾ ಅಪಾಯ ಆಗುವ ಸಂಭವವಿದೆ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ ಕೂಡಲೇ ಈ ಕೇಬಲ್ ಗಳನ್ನು ಬೇರೆ ಕಡೆ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಅವರು ತಮ್ಮ ಅಭಿಪ್ರಾಯಗಳನ್ನು ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು, ಜಕ್ಕೂರು ಕೆರೆ ಪಕ್ಕ ಇರುವ ರಸ್ತೆಯು ತೀರಾ ಹದಗೆಟ್ಟಿದೆ ಈ ರಸ್ತೆಯು ಯಲಹಂಕಕ್ಕೆ ಹೋಗುವ ಮಾರ್ಗವಾಗಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ತುಂಬಾ ಹೆಚ್ಚಾಗಿ ಕಂಡು ಬರುತ್ತದೆ ಮಳೆ ಬಂದರೆ ವಾಹನ ಸವಾರರು ಇಲ್ಲಿ ಪರದಾಡುವ #ಸ್ಥಿತಿ ನಿರ್ಮಾಣವಾಗಿದೆ ದಯಮಾಡಿ ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಅಲ್ಲಿನ #ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.