ತ್ರಿಶಂಕುಗಳಾಗಿರುವ ಅನುದಾನಿತ ಉಪನ್ಯಾಸಕರು
1 min readಈ ಉಪನ್ಯಾಸಕರಿಗೆ ಹಳೇ ಪಿಂಚಣಿಯೂ ಇಲ್ಲ ,ಹೊಸ ಪಿಂಚಣಿಗೆ ಸೇರಸಲಾಗದವರು, ಇವರ ಬವಣೆ ಶೋಚನೀಯ, ಪ್ರಾಣ ಹೋದವರು ಲೆಕ್ಕಕ್ಕಿಲ್ಲ ಬಿಡಿ, ಉಪನ್ಯಾಸಕರ ಗತಿಯೇ ಹೀಗಾದರೆ ,ಜನಸಾಮಾನ್ಯರ ಪಾಡೇನು.? ಈ ಉಪನ್ಯಾಸಕರು ಬಹಳ ಹಿಂದೆ ಅನುದಾನ ಪಡೆಯಲು ಅರ್ಹರಾದವರು, ಹಿಂದಿನ ಬಾಕಿ ಪಡೆಯದವರು.ಇವರೇಕೆ ಸರಕಾರಕ್ಕೆ ಹೊರೆಯಾದರು ? 2014 ರ. ಸರಕಾರಿ. ಆದೇಶ ದ ಪ್ರಕಾರ 2006 ರ ನಂತರ ನೇಮಕಾತಿಯಾಗಿರುವ. ಉಪನ್ಯಾಸಕರಿಗೆ ಅವರ ಅನುದಾನಿತ ಸೇವೆಯನ್ನು ಮಾತ್ರ ಪರಿಗಣಿಸಿ ವೇತನ ಮರುನಿಗದೀಕರಣ ಮಾಡಿ , ಹೊಸ ಪಿಂಚಣಿ ಯೋಜನೆ ಜಾರಿಗೆ ಆದೇಶ ಹೊರಡಿಸಲಾಯಿತು, ಈಗಾಗಲೇ ನೇಮಕಾತಿಯಾಗಿದ್ದ. 1987 -1993 ರಿಂದ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು , ಅನುದಾನ ಪಡೆದಿದ್ದು 2006 ರ ನಂತರವೇ, ಕಾರಣಗಳಿಗೆ ಕೊರತೆ ಇಲ್ಲ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿ 2014ರ ಆದೇಶ ಪೂರ್ವಾನ್ವಯಗೊಳಿಸಿದ್ದು ಶೋಚನೀಯ. ಇದರ ವಿರುದ್ಧ ಉಪನ್ಯಾಸಕರು ನ್ಯಾಯಾಲಯದ ಮೊರೆ ಹೋದರು, 1ನೇ ಬೆಂಚ್ ಉಪನ್ಯಾಸಕರ ಪರ ನ್ಯಾಯಾಲಯ ಮದ್ಯಂತರ ಆದೇಶ ಹೊರಡಿಸಿತು.ಆದರೆ ಸರಕಾರ 2ನೇ ಬೆಂಚ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಇಲ್ಲಿಗೆ 8 ವರ್ಷ ಮುಗಿಸಿ 9ನೇ ವರ್ಷಕ್ಕೆ ಕಾಲಿಟ್ಟಿದೆ ಆದರೆ ಪರಿಹಾರ ಮಾತ್ರ ಯಕ್ಷ ಪ್ರಶ್ನೆಯಾಗಿ ಉಳಿದಿದೆ.